ಆಕಾಶದಲ್ಲಿ ತೇಲಾಡುವ ಸ್ವಿಮಿಂಗ್ ಫೂಲ್ ಇದು !ಆನ್‍ಲೈನ್ ಬುಕ್ಕಿಂಗಾಗಿ ಮುಗಿಬಿದ್ದ ಜನ..ಇದರ ವಿಶೇಷತೆ ಏನ್ ಗೊತ್ತಾ ?

Kannada Mahiti

ಮಾನವನ ಕಲ್ಪನೆಗಳಿಗೆ ಮಿತಿಯೇ ಇಲ್ಲ. ಭೂಮಿಯ ಮೇಲೆ ಒಂದಿಷ್ಟು ಚಮತ್ಕಾರಗಳನ್ನು ಸೃಷ್ಟಿಸ್ತಾನೇ ಇರ್ತಾನೆ. ಇನ್ನು ಬಾಹ್ಯಾಕಾಶದಲ್ಲೂ ಮಾನವನ ಹೆಜ್ಜೆ ಮೂಡಿದೆ. ವೈಜ್ಷಾನಿಕವಾಗಿ ಮುಂದುವರೆದಂತೆ ಮಾನವರು ಹೊಸತನಕ್ಕೆ ಮುಂದಾಗ್ತಾನೆ ಇದ್ದಾರೆ. ಈ ಹಿಂದೆ ಭೂಮಿ ಮೇಲೆ ಮಾತ್ರ ಓಡಾಡುತ್ತಿದ್ದ ಮಾನವ ಮುಂದೊಂದು ದಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡ್ಬೇಕೆಂದು ಕನಸು ಕಂಡ. ಅದ್ರಂತೆ ವಿಮಾನದಲ್ಲಿ, ವಿವಿಧ ಜೆಟ್‍ಗಳಲ್ಲಿ ಹಕ್ಕಿಯಂತೆ ಹಾರಾಡಲು ಶುರು ಮಾಡಿದ. ಇಷ್ಟು ದಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡ್ತಿದ್ದವರು ಇದೀಗ ಬಾನಂಗಳದಲ್ಲಿ ಮೀನಿನಂತೆ ಈಜಾಡಲು ರೆಡಿಯಾಗಿದ್ದಾರೆ. ಅರೇ, ಬಾನಂಗಳದಲ್ಲಿ ಮೀನಿನಂತೆ ಈಜಾಡಲು ಸಾಧ್ಯನಾ..? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡವುದು ಸಹಜ. ಆದ್ರೆ ಅದಕ್ಕೂ ಕಾಲ ಕೂಡಿ ಬಂದಿದೆ. ಹೌದು, ಸಾಮಾನ್ಯವಾಗಿ ಮನೆಯಲ್ಲೋ, ಹೋಟೆಲ್, ಅಪಾರ್ಟ್‍ಮೆಂಟ್ ಬಳಿ ಇರುವ ಸ್ವಿಮ್ಮಿಂಗ್‍ಪೂಲ್ ಅನ್ನ ನೀವೆಲ್ಲಾ ನೋಡಿರ್ತೀರಿ ಅಲ್ವಾ?

ಅದ್ಕಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಹಡಗುಗಳಲ್ಲಿ ಕೂಡ ಸ್ವಿಗ್ಮಿಂಗ್ ಪೂಲ್ ಇರುತ್ತೆ. ಆದ್ರೀಗ ಸ್ವಿಮ್ಮಿಂಗ್‍ಪೂಲ್ ಇರುವುದು ಭೂಮಿ ಮೇಲೋ ಅಥವಾ ಸಾಗರದ ಮೇಲೆ ಅಲ್ಲ..ಬದಲಾಗಿ ಆಕಾಶದ ಮೇಲೆ. ಯೆಸ್, ಇದು ಸಮಾನ್ಯ ಈಜುಕೊಳವಲ್ಲ. ಈಜು ಕೊಳಕ್ಕೆ ಇನ್ನೊಂದು ಈಜುಕೊಳ ಸಾಟಿಯಾಗಲು ಸಾಧ್ಯವಿಲ್ಲ. ಇದು ಜಗತ್ತಿನ ಮೊಟ್ಟ ಮೊದಲ ತೇಲುವ ಈಜುಕೊಳ. ಈ ಈಜುಕೊಳದ ಗತ್ತೆ ಬೇರೆ.. ಇದ್ರಲ್ಲಿ ಈಜಾಡುವ ಗಮ್ಮತ್ತೆ ಬೇರೆ. 1967ರಲ್ಲಿ ನ್ಯೂಯಾರ್ಕ್‍ನಲ್ಲಿ ಜಗತ್ತಿನ ಮೊಟ್ಟ ಮೊದಲ ಚಲಿಸುವ ಈಜುಕೊಳವನ್ನ ನಿರ್ಮಿಸಲಾಗಿತ್ತು. ಚಲಿಸುವ ಗಾಡಿಯ ಹಿಂದೇನೇ ಇದ್ದ ಈ ಈಜುಕೊಳದಲ್ಲಿ ಮಕ್ಕಳು ಈಜುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗ್ತಿದ್ರು. ಈ ಮೂವಿಂಗ್ ಸ್ವಿಮ್ಮಿಂಗ್ ಫುಲ್ ಜಗತ್ತಿನ ಅಚ್ಚರಿಗೂ ಕಾರಣವಾಗಿತ್ತು. 1967-2021ರವರೆಗೆ ವಿವಿಧ ನೂರಾರು ಬಗೆಯ ಈಜುಕೊಳಗಳು ವಿಶ್ವದಾದ್ಯಂತ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಇದುವರೆಗೆ ಯಾವ ದೇಶವು ನಿರ್ಮಾಣ ಮಾಡದ ಈಜುಕೊಳವನ್ನ ಇಂಗ್ಲೆಂಡ್ ನಿರ್ಮಾಣ ಮಾಡಿದೆ. ವಿಶ್ವದ ದುಬಾರಿ ನಗರ ಲಂಡನ್ ಅಂದ್ರೆನೇ ಹಾಗೆ. ಲಂಡನ್ ರಸ್ತೆಗಳಲ್ಲಿ ಸಂಚರಿಸಿದವರಿಗೆ ಸಿಗುವ ಮಜಾವೇ ಬೇರೆ. ಶ್ರೀಮಂತಿಕೆಯನ್ನು ಅಷ್ಟರ ಮಟ್ಟಿಗೆ ಗುಡ್ಡೆ ಹಾಕಿಕೊಂಡಿದೆ ಲಂಡನ್.

ಹೆಜ್ಜೆ ಇಟ್ಟಲೆಲ್ಲಾ ಕಾಣುವ ಬೃಹತ್ ಗಗನಚುಂಬಿ ಕಟ್ಟಡಗಳು, ಸುಂದರ ರಸ್ತೆಗಳು ಅಬ್ಬಾ.. ಈ ಲಂಡನ್‍ಗೆ ಲಂಡನೇ ಸಾಟಿ. ಇದೇ ಲಂಡನ್‍ನ ಮುಕುಟಕ್ಕೆ ಇದೀಗ ಮತ್ತೊಂದು ಗರಿ ಬಂದಿದೆ. ಫೋಟೋ ನೋಡಿ, ಇದ್ಯಾರೋ ಗ್ರಾಫಿಕ್ಸ್ ಮಾಡಿರ್ಬೇಕು ಅಂತ ತಿಳ್ಕೋಬೇಡಿ. ಯಾಕಂದ್ರೆ ಮೇಲ್ನೋಟಕ್ಕೆ ತೇಲುತ್ತಾ ಈಜಾಡುವ ಈ ಈಜುಕೊಳ ಗ್ರಾಫಿಕ್ಸ್ ತರ ಗೋಚರವಾದ್ರೂ ಇದು ರಿಯಲ್ ಫೋಟೋ. ಎರಡು ಕಟ್ಟಡಗಳ ನಡುವೆ ಸ್ವಿಮ್ಮಿಂಗ್ ಪೂಲ್ ಅನ್ನ ನಿರ್ಮಾಣ ಮಾಡಲಾಗಿದೆ. ಈ ಸ್ವಿಮ್ಮಿಂಗ್ ಪೂಲ್ ಪಾರದರ್ಶಕ ಮಾತ್ರವಲ್ಲದೇ, ತೇಲಾಡುವ ಈಜುಕೊಳ. ಜನರು ಈಜಾಡುತ್ತಿರುವ ಫೋಟೋ ಎಷ್ಟೊಂದು ಮನಮೋಹಕವಾಗಿದೆ ಅಲ್ವಾ? ಇನ್ನೂ, ಇಲ್ಲಿ ಈಜಾಡಿದ್ರೆ ಅನುಭವ ಹೇಗಿರ್ಬೇಡ ಹೇಳಿ. ಇದುವೇ ನೋಡಿ ಲಂಡನ್‍ನಲ್ಲಿ ನಿರ್ಮಾಣವಾಗಿರುವ ತೇಲುವ ಹಾಗೂ ಪಾರದರ್ಶಕವಾದ ಸ್ವಿಮ್ಮಿಂಗ್ ಪೂಲ್. ವಿಶ್ವದ ಮೊಟ್ಟ ಮೊದಲ ‘ಸ್ಕೈ ಪೂಲ್’ ಅಂತಲೂ ಕರೆಯಲಾಗುತ್ತೆ. ನೈರುತ್ಯ ಲಂಡನ್‍ನ ರಾಯಭಾರ ಕಚೇರಿಯ ಎರಡು ಗಗನಚುಂಬಿ ಅಪಾರ್ಟ್‍ಮೆಂಟ್‍ಗಳ 10ನೇ ಮಹಡಿಯ ಮಧ್ಯದಲ್ಲಿ ಈ ಈಜುಕೊಳವಿದೆ.

ಇದೀಗ ಈ ಈಜುಕೊಳ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಾ ಇದೆ. ಒಮ್ಮೆಯಾದ್ರೂ ಈ ಈಜುಕೊಳದಲ್ಲಿ ಈಜಬೇಕೆಂದು ಜನರು ಉತ್ಸುಕರಾಗಿದ್ದಾರೆ. ಇದ್ಕಾಗಿ ಕೊರೊನಾದ ನಡುವೆಯೂ ವಿಶ್ವದ ನಾನ ಕಡೆಯಿಂದ ಆನ್‍ಲೈನ್ ಬುಕ್ಕಿಂಗಾಗಿ ಜನರು ಮುಗಿ ಬಿದ್ದಿದ್ದಾರೆ. ಈ ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. 82 ಅಡಿ ಉದ್ದವಿರುವ ಈ ಈಜುಕೊಳದಲ್ಲಿ ಈಜಾಡಿದ್ರೆ ಆಕಾಶದಲ್ಲಿಯೇ ಈಜಾಡಿದಂತಹ ಅನುಭವ ಸಿಗಲಿದೆ. ಇಲ್ಲಿ ಈಜಾಡುವ ಒಳಗಡೆಯ ದೃಶ್ಯಗಳು ಹೊರಗಡೆ ಸ್ಪಷ್ಟವಾಗಿ ಕಾಣುತ್ತೆ. ಈ ಈಜುಕೊಳದ ಮೇಲ್ಛಾವಣಿಯಲ್ಲಿ ಬಾರ್ ಮತ್ತು ಸ್ಪಾವನ್ನು ಸಹ ನಿರ್ಮಿಸಲಾಗಿದೆ. ಈ ಈಜುಕೊಳದಲ್ಲಿ 1,48,000 ಲೀಟರ್ ನೀರು ಮತ್ತು ಎರಡು ವಸತಿ ಕಟ್ಟಡಗಳ ನಡುವೆ ಈಜುಗಾರರಿಗೆ 35 ಮೀಟರ್ ಗಾಳಿಯಲ್ಲಿ ತೇಲುವಂತೆ ಕೊಳವನ್ನು ನಿರ್ಮಿಸಲಾಗಿದೆ. ಈ ಅದ್ಭುತ ಈಜುಕೊಳವನ್ನು ಎಕ್ಲರ್ ಸೇ ಎಂಬ ರಚನಾತ್ಮಕ ಇಂಜಿನಿಯರ್ ನಿರ್ಮಾಣ ಮಾಡಿದ್ದಾರೆ.