ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯಶ್..ಐರಾ,ಯಥರ್ವ್ ಕೊಟ್ರು ಸ್ಪೆಷಲ್ ಬರ್ತ್ ಡೇ ಗಿಫ್ಟ್.!

ಸುದ್ದಿ

ಸ್ನೇಹಿತರೇ, ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್..ಒಟ್ಟಿನಲ್ಲಿ ಕೆಜಿಎಫ್ ಬಂದ ಮೇಲೆ ಕನ್ನಡ ಇಂಡಸ್ಟ್ರಿ ಬೇರೆ ಲೆವೆಲ್ ಗೆ ಹೋಯಿತು ಎಂದರೆ ತಪ್ಪಾಗಲ್ಲ. ಇನ್ನು ಕೆಜಿಎಫ್ ಹೀರೊ ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾ ಬಳಿಕ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು.

ಈಗ ಇಡೀ ಭಾರತ ಸಿನಿಮಾರಂಗವೇ ಕೆಜಿಎಫ್ 2ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಈಗ ನ್ಯಾಷನಲ್ ಲೆವೆಲ್ ನಲ್ಲಿ ಸೂಪರ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇನ್ನು ಈ ದಿನ ಯಶ್ ತಮ್ಮ ೩೬ನೇ ವರ್ಷದ ಹುಟ್ಟುಹಬ್ಬವನ್ನ ತಮ್ಮ ಇಡೀ ಕುಟುಂಬದೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನನ್ನ ಹುಟ್ಟುಹಬ್ಬದ ಸಂತೋಷವನ್ನ ನಾನು ನನ್ನ ಸುತ್ತಮುತ್ತಲಿನವರ ಜೊತೆ ಆಚರಣೆ ಮಾಡಿಕೊಂಡಿದ್ದೇನೆ.

ಆದರೆ ಇಂದು ನನ್ನ ಹುಟ್ಟುಹಬ್ಬ ತುಂಬಾ ವಿಶೇಷವಾಗಿದ್ದು, ಮಕ್ಕಳು, ಮಡದಿಯೊಂದಿಗೆ ಆಚರಿಸಿಕೊಳ್ಳುವ ಹಾಗೆ ಮಾಡಿದೆ. ನನ್ನ ಎಲ್ಲಾ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಅಭಿಮಾನಕ್ಕೆ, ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ.ನಿಮ್ಮ ಈ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಯಾವಾಗಲು ಹೀಗೆ ಇರಲಿ. ನನ್ನ ಎಲ್ಲಾ ಹಿತೈಷಿಗಳಿಗೂ, ಅಭಿಮಾನಿಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಭಾವಿಸಿದ್ದೇನೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಯಶ್..ಇನ್ನು ತಮ್ಮ ಜನ್ಮದಿನದ ಖುಷಿಯಲ್ಲಿ ಯಶ್ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ತಮ್ಮ ಮುದ್ದು ಮಕ್ಕಳಾದ ಐರಾ ಮತ್ತು ಯಥರ್ವ್ ನನ್ನ ಎತ್ತಿಕೊಂಡಿದ್ದು, ರಾಧಿಕಾ ಪಂಡಿತ್ ಕೂಡ ಈ ಫೋಟೋದಲ್ಲಿದ್ದು ಯಥರ್ವ್ ಕೇಕ್ ಕೇಕ್ ಮಾಡುತ್ತಿರುವ ಫೋಟೋ ಇದಾಗಿದೆ.

ಇನ್ನು ಐರಾ ಮತ್ತು ಯಥರ್ವ್ ಸೇರಿ ತಂದೆ ಯಶ್ ಗೆ ವಿಶೇಷ ಗಿಫ್ಟ್ ನ್ನ ನೀಡಿದ್ದು, ಇಬ್ಬರು ಸೇರಿ ಬರೆದಿರುವ ಹೃದಯವಿರುವ ಚಿತ್ರ ಇದಾಗಿದ್ದು, ಅದರಲ್ಲಿ ಐರಾ ಮತ್ತು ಯಥರ್ವ್ ತಮ್ಮ ಮುದ್ದಾದ ಅಂಗೈನ ಮುದ್ರೆ ಒತ್ತಿದ್ದು, Happy Birthday DADDA(ದಡ್ಡಾ) ಎಂದು ಬರೆದಿರುವ ವಿಶೇಷ ಗಿಫ್ಟ್ ನೀಡಿದ್ದಾರೆ. ಇನ್ನು ಈಗ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇರೋ ಕಾರಣ ಅಭಿಯಾನಿಗಳು ಯಶ್ ಮನೆ ಬಳಿ ಬರಲು ಸಾಧ್ಯವಾಗಿಲ್ಲ..ಆದರೆ ತಮ್ಮ ನೆಚ್ಚಿನ ನಟನಿಗೆ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟಿದ ಶುಭಾಶಯಗಳನ್ನ ಕೋರುತ್ತಿದ್ದಾರೆ..ಇನ್ನು ನಮ್ಮ ತಂಡದಿಂದಲೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..