ಯಶ್ ಹಾಗೂ ರಾಧಿಕಾ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ.?ಇಷ್ಟು ಚಿಕ್ಕವರಾ.!

Advertisements

ನಮಸ್ತೇ ಸ್ನೇಹಿತರೇ, ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೇವಲ 17 ದಿನದಲ್ಲೇ 1000ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು ಕನ್ನಡ ಚಿತ್ರರಂಗದ ಇತಿಹಾಸದ ಎಲ್ಲಾ ರೆಕಾರ್ಡ್ಸ್ ಗಳನ್ನ ಮುರಿಯುವುದರ ಜೊತೆಗೆ ಭಾರತೀಯ ಸಿನಿಮಾರಂಗದ ಹಿಂದಿನ ಅನೇಕ ರೆಕಾರ್ಡ್ಸ್ ಗಳನ್ನ ಕೂಡ ಪುಡಿ ಪುಡಿ ಮಾಡಿ ಮುನ್ನುಗ್ಗುತ್ತಿದೆ. ತಮಿಳುನಾಡಿನಲ್ಲಿ 100ಕೋಟಿ ಕಲೆಕ್ಷನ್ ಮಾಡಿದ ಕನ್ನಡದ ಮೊದಲ ಸಿನಿಮಾ ಎಂದೆನಿಸಿಕೊಂಡಿದೆ. ಇನ್ನು ಬಾಲಿವುಡ್ ಸಿನಿಮಾರಂಗ ಬೆಚ್ಚಿಬೀಳುವಂತೆ ಮಾಡಿರುವ ಕೆಜಿಎಫ್ ಚಾಪ್ಟರ್ 2, 400ಕೋಟಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಇಟ್ಟಿದೆ. ಒಟ್ಟಿನಲ್ಲಿ ನಮ್ಮ ಕನ್ನಡದ ಕೆಜೆಎಫ್ 2 ನಿಂದಾಗಿ ಇಡೀ ಭಾರತೀಯ ಸಿನಿಮಾ ರಂಗ ಸ್ಯಾಂಡಲ್ವುಡ್ ಕಡೆ ನೋಡುವಂತೆ ಮಾಡಿರುವುದು ನಮ್ಮ ಕನ್ನಡದ ಹೆಮ್ಮೆಯೇ ಸರಿ..ಇನ್ನು ಅಚ್ಚರಿಯ ವಿಚಾರ ಎಂದರೆ, ವಯಸ್ಸಿನಲ್ಲಿ ಯಶ್ ಗಿಂತ ರಾಧಿಕಾ ಪಂಡಿತ್ ಅವರು ದೊಡ್ಡವರಂತೆ..ಎಷ್ಟು ವರ್ಷ ದೊಡ್ಡವರು ಗೊತ್ತಾ.?

Advertisements

ಇನ್ನು ನಮ್ಮ ಸ್ಯಾಂಡಲ್ವುಡ್ ನ ತಾರಾ ಜೋಡಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಲವ್ ಮಾಡಿ ಮದ್ವೆಯಾದವರು. ವಿಶೇಷ ಎಂದರೆ ಯಶ್ ಮತ್ತು ರಾಧಿಕಾ ಪಂಡಿತ್ 2004ರಲ್ಲೇ ನಂದಗೋಕುಲ ಧಾರವಾಹಿಯಲ್ಲೆ ಒಟ್ಟಾಗಿ ನಟಿಸಿದವರು. ಆಗ ಒಂದೇ ಸೀರಿಯಲ್ ನಲ್ಲಿ ನಟಿಸಿದ್ರೂ, ಒಂದೇ ಕ್ಯಾಬ್ ನಲ್ಲಿ ಓದದಿದ್ರೂ ಒಬ್ಬರಿಗೊಬ್ಬರು ಮಾತನಾಡುತ್ತಿರಲಿಲ್ಲ. ಮತ್ತೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು ಬೆಳ್ಳಿತೆರೆಯ ಲ್ಲಿ ೨೦೦೮ರಲ್ಲಿ ತೆರೆಗೆ ಬಂದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ. ಇದೆ ವೇಳೆ ಇವರಿಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಮತ್ತೆ ಈ ತಾರಾ ಜೋಡಿ, ಒಂದೇ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಡ್ರಾಮಾ ಸಿನಿಮಾದಲ್ಲಿ. ಡ್ರಾಮಾ ಸಿನಿಮಾದ ಬಳಿಕ ಈ ಜೋಡಿ ನಡುವೆ ಇದ್ದ ಗೆಳೆತನ ಪ್ರೀತಿಗೆ ತಿರುಗಿ ಯಶ್ ರಾಧಿಕಾ ಪಂಡಿತ್ ಅವರಿಗೆ ಪ್ರಪೋಸ್ ಮಾಡಿದ್ದರು. ಇದರ ಬಳಿಕ ಮಿಸ್ಟರ್ & ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳಲ್ಲಿ ಯಶ್ ರಾಧಿಕಾ ಜೋಡಿ ಒಟ್ಟಾಗಿ ಅಭಿನಯಿಸಿದ್ದರು.

ಇದರ ಬಳಿಕ ಯಶ್ ರಾಧಿಕಾ ತಮ್ಮ ಕುಟುಂಬಗಳಿಂದ ಗ್ರೀನ್ ಸಿಗ್ನಲ್ ಪಡೆದು ೨೦೧೬ ಆಗಸ್ಟ್ ೧೨ರಂದು ಗೋವಾದಲ್ಲಿ ನಿಚ್ಚಿತಾರ್ಥ ಮಾಡಿಕೊಂಡರು. ಇನ್ನು ಡಿಸೆಂಬರ್ ನಲ್ಲಿ ಈ ಜೋಡಿ ದಾಂಪತ್ಯ ಕಾಲಿಟ್ಟಿತು. ತುಂಬಾ ಸುಂದರವಾದ ಈ ಕುಟುಂಬಕ್ಕೆ ೨೦೧೮ರ ಡಿಸೆಂಬರ್ ನಲ್ಲಿ ಮುದ್ದಾದ ಹೆಣ್ಣುಮಗಳು ಆಯ್ರಾ ಜನಿಸಿದ್ಲು. ಮುದ್ದು ಮಗನಾಗಿ ಯಥರ್ವ್ ೨೦೧೯ ಅಕ್ಟೋಬರ್ ೩೦ರಂದು ಜನಿಸಿದ. ಸ್ಯಾಂಡಲ್ವುಡ್ ನ ಮಾದರಿ ಕಪಲ್ಸ್ ಎನಿಸಿಕೊಂಡಿರುವ ಯಶ್ ರಾಧಿಕಾ ಪಂಡಿತ್ ಅವರ ನಡುವೆ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ಹೌದು, ಅದೆಷ್ಟೋ ಮಂದಿಗೆ ಗೊತ್ತಿಲ್ಲದ ಅಚ್ಚರಿ ವಿಚಾರವೆಂದರೆ ರಾಧಿಕಾ ಪಂಡಿತ್ ಅವರು ಯಶ್ ಗಿಂತ ವಯಸ್ಸಿನಲ್ಲಿ ದೊಡ್ಡವರು. ಸುಮಾರು ಎರಡು ವರ್ಷದಷ್ಟು ದೊಡ್ಡವರು ರಾಧಿಕಾ. ಇವರು ಹುಟ್ಟಿದ್ದು 1984 ಮಾರ್ಚ್ 17ರಂದು. ಯಶ್ ಅವರು ಹುಟ್ಟಿರೋದು ಜನವರಿ 6, ೧೯೮೬ರಂದು. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಸೆಲಬ್ರೆಟಿ ಕಪಲ್ಸ್ ಎನಿಸಿರುವ ಯಶ್ ರಾಧಿಕಾ ಪಂಡಿತ್ ಅವರ ಸುಂದರ ಸಂಸಾರ, ಎಷ್ಟೋ ಜನರಿಗೆ ಮಾದರಿ ಎಂದರೆ ತಪ್ಪಾಗೊದಿಲ್ಲ..