ಇದ್ದಕಿದ್ದಂತೆ ಯಶ್ ಮನೆಗೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ರಂಗಣ್ಣ! ಅಸಲಿ ವಿಷಯ ಏನ್ ಗೊತ್ತಾ?

Cinema

ಕನ್ನಡದ ಖ್ಯಾತ ಸುದ್ದಿವಾಹಿನಿಗಳಲ್ಲಿ ಒಂದಾಗಿರುವ ಪಬ್ಲಿಕ್ ಟಿವಿಯ ರಂಗನಾಥ್ ಅವರು ರಾಕಿಂಗ್ ಸ್ಟಾರ್ ಯಶ್ ಮನೆಗೆ ಹೋಗಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳ್ಲಲಿ ಸಖತ್ ವೈರಲ್ ಆಗಿದೆ. ಯಶ್ ರಾಧಿಕಾ ಮನೆಗೆ ರಂಗಣ್ಣ ಹೋಗಿದ್ದೇಕೆ ಎಂದು ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹೌದು, ರಂಗನಾಥ್ ಅವರು ತಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಯಶ್ ರಾಧಿಕಾ ದಂಪತಿಗೆ ಆಹ್ವಾನ ನೀಡಲು ಹೋಗಿದ್ದಾರೆ. ಇನ್ನು ಇದೆ ವೇಳೆ ತೆಗೆದ ಫೋಟೋವೊಂದು ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಸಲಿಗೆ ರಂಗಣ್ಣ ಯಶ್ ಮನೆಗೆ ಹೋಗಿದ್ದೇಕೆ ಗೊತ್ತಾ?

ಹೌದು, ಪಬ್ಲಿಕ್ ಟಿವಿ ರಂಗಣ್ಣ ಅವರ ಮನೆಯಲ್ಲಿ ಏನೋ ಶುಭ ಕಾರ್ಯ ನಡೆಯಲಿದ್ದು, ಆಹ್ವಾನ ಪತ್ರಿಕೆಯನ್ನ ಯಶ್ ರಾಧಿಕಾ ದಂಪತಿಗೆ ಕೊಡುವ ಸಲುವಾಗಿ ಅವರ ಮನೆಗೆ ಭೇಟಿ ಕೊಟ್ಟಿದ್ದು, ಆಹ್ವಾನ ಪತ್ರಿಕೆ ಕೊಡುವ ವೇಳೆ ತೆಗೆದ ಫೋಟೋ ಸಖತ್ ವೈರಲ್ ಆಗಿದೆ. ಇನ್ನು ಈ ವೇಳೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳಾದ ಐರಾಳನ್ನ ಎತ್ತಿಕೊಂಡಿದ್ದು, ಮನೆಗೆ ಬಂದ ರಂಗಣ್ಣನ ಜೊತೆಗೆ ಕುಟುಂಬದವರೆಲ್ಲಾ ಮಾತನಾಡಿದ್ದಾರೆ. ಇನ್ನು ಯಶ್ ಮನೆಗೆ ರಂಗನಾಥ್ ಅವರು ಭೇಟಿ ಕೊಟ್ಟದ್ದು ತುಂಬಾನೇ ವಿಶೇಷ ಎಂದು ಹೇಳಲಾಗಿದ್ದು, ತಮ್ಮ ಮನೆಗೆ ಬಂದ ರಂಗಣ್ಣ ಅವರನ್ನ ಪ್ರೀತಿಯಿಂದ ಸ್ವಾಗತ ಮಾಡಿ ಕುಶಲೋಪರಿ ಮಾತನಾಡಿದ್ದಾರೆ ಯಶ್ ರಾಧಿಕಾ ದಂಪತಿ.

ಇನ್ನು ಕೋವಿಡ್ ನಿಂದಾಗಿ ಅಷ್ಟಾಗಿ ಯಾವುದೇ ಕಾರ್ಯಕ್ರಮಗಳು ಇಲ್ಲದಿರುವ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಮನೆಯಲ್ಲೇ ಇದ್ದು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಜಿಎಫ್ ಎರಡನೇ ಭಾಗವನ್ನ ಮುಂದಿನ ವರ್ಷ ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಲಾಗಿದ್ದು, ಮೊನ್ನೆಯಷ್ಟೇ ಕೆಜಿಎಫ್ ೨ ಭಾಗದ ಸನ್ನಿವೇಶವೊಂದರನ್ನ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಯಶ್ ಅಭಿಮಾನಿಗಳು ಸೇರಿದಂತೆ, ಇಡೀ ಭಾರತೀಯ ಸಿನಿಮಾ ರಂಗ ಕೆಜಿಎಫ್-2ರ ಸಿನಿಮಾ ನೋಡಲು ಕಾಯುತ್ತಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ..ಕೆಜಿಎಫ್ 2 ಇನ್ನೆಂತಹ ಕಮಾಲ್ ಮಾಡಲಿದೆ ಎಂದು ಕಾದುನೋಡಬೇಕಾಗಿದೆ..