ವರ್ಷಗಳಿಂದ ಒಬ್ಬಂಟಿಯಾಗಿ ಲಾರಿ ಡ್ರೈವಿಂಗ್ ಮಾಡುತ್ತಿರುವ ಈ ಮಹಿಳೆಯ ಅಸಲಿ ಕತೆ ಕೇಳಿದ್ರೆ ಕಣ್ಣೀರು ಬರುತ್ತೆ !

Inspire

ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಅನ್ನುವಂತೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಗಂಡಸರು ಮಾತ್ರ ಮಾಡಬಹುದು ಎನ್ನಲಾದ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರು ದಾಪುಗಾಲು ಇಡುತ್ತಿದ್ದಾರೆ. ಈಗ ಇದೆ ರೀತಿ ಮಹಿಳೆಯೊಬ್ಬರು ತನ್ನ ಜೀವನದಲ್ಲಿ ಎದುರಾಗಿ ಬಂದ ಎಲ್ಲಾ ಕಷ್ಟಗಳನ್ನ ಎದುರಿಸಿ ಮಾಡುತ್ತಿರುವ ಕೆಲಸ ಕೇಳಿದ್ರೆ ಅಚ್ಚರಿಪಡ್ತೀರಾ. ಹೌದು, ಭೋಪಾಲ್ ನ ಯೋಗಿತಾ ಎಂಬ ಮಹಿಳೆ ಡಿಗ್ರಿ ಓದಿಕೊಂಡಿದ್ದು, ಗಂಡ ಮಕ್ಕಳ ಜೊತೆ ಸುಖ ಸಂಸಾರದ ಜೀವನ ನಡೆಸುತ್ತಿದ್ದರು. ಆದರೆ ಇವರ ಸುಂದರ ಸುಖ ಸಂಸಾರದ ಕುಟುಂಬ ನೋಡಿ ಆ ವಿಧಿಗೆ ಸಹಿಸಲಾಗಲಿಲ್ಲ ಅನ್ನಿಸುತ್ತೆ.

ಯೋಗಿತಾ ಅವರ ಪತಿ ಅ’ಪಘಾತವೊಂದರಲ್ಲಿ ಸಾ’ವನ್ನಪ್ಪುತ್ತಾರೆ. ಇನ್ನು ಇದರ ನಡುವೆಯೇ ಯೋಗಿತಾ ಅವರ ಸಹೋದರ ತನ್ನ ಭಾವನ ಅಂತ್ಯಸಂಸ್ಕಾರಕ್ಕೆಂದು ಬರುವ ವೇಳೆ ಆತನಿಗೂ ಕೂಡ ಅ’ಪಘಾತ ಉಂಟಾಗಿ ತೀರಿಕೊಳ್ಳುತ್ತಾನೆ. ವಿಧಿ ವಿಪರೀತ ಎನ್ನುವಂತೆ ಒಂದೇ ಬಾರಿಗೆ ಗಂಡ ಮತ್ತು ತನ್ನ ಸಹೋದರನನ್ನ ಕಳೆದುಕೊಂಡ ಯೋಗಿತಾ ಒಂಟಿಯಾಗಿಬಿಡುತ್ತಾರೆ. ಆದರೆ ಏನೇ ಆದರೂ ಮಕ್ಕಳ ಮುಖವನ್ನ ನೋಡಿ ಜೀವನದಲ್ಲಿ ಬರುವ ಕಷ್ಟಗಳನ್ನ ಎದುರಿಸಲೇಬೇಕಂದು ಎಲ್ಲದಕ್ಕೂ ರೆಡಿಯಾಗುತ್ತಾಳೆ. ಇನ್ನು ಯೋಗಿತಾ ಅವರು ಕೆಲಸ ಮಾಡುತ್ತಿದ್ದರೂ ಅದರಿಂದ ಬಂದ ಹಣದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾಗುತ್ತದೆ. ಅದಾಗಲೇ ಜೀವನದಲ್ಲಿ ಏನೇ ಬಂದರೂ ಎದುರಿಸಲಬೇಕು ಎಂದು ಎಲ್ಲದಕ್ಕೂ ರೆಡಿಯಾಗಿದ್ದ ಯೋಗಿತಾ ಡ್ರೈವರ್ ಆಗಿ ಲಾರಿ ಏರುತ್ತಾರೆ.

ಇನ್ನು ಅಂದಿನಿಂದ ಇಂದಿನವರೆಗೂ ಬರೋಬ್ಬರಿ ೧೫ ವರ್ಷಗಳಿಂದ ದೇಶದ ಹಲವಾರು ಸ್ಥಳಗಳಲ್ಲಿ ಏಕಾಂಗಿಯಾಗಿಯೇ ಡ್ರೈವಿಂಗ್ ಮಾಡಿದ್ದಾರೆ ಯೋಗಿತಾ. ಇನ್ನು ಲಾರಿ ಓಡಿಸುವ ವೇಳೆ ರಸ್ತೆ ಬದಿಗಳಲ್ಲಿ ತಮ್ಮ ಲಾರಿ ನಿಲ್ಲಿಸಿ ತಾವೇ ಸ್ವತಃ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು ಯೋಗಿತಾ. ಇನ್ನು ತಾವು ಮಾಡುತ್ತಿರುವ ಲಾರಿ ಡ್ರೈವರ್ ಕೆಲಸದಿಂದ ಬರುವ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇನ್ನು ಹಲವಾರು ವರ್ಷಗಳಿಂದ ಯೋಗಿತಾ ಅವರು ಮಾಡುತ್ತಿರುವ ಲಾರಿ ಡ್ರೈವಿಂಗ್ ನೋಡಿ ಮಹೇಂದ್ರ ಕಂಪನಿಯವರು ಟ್ರಕ್ ಒಂದನ್ನ ನೀಡಿ ಗೌರವಿಸಿದ್ದಾರೆ. ಒಟ್ಟಿನಲ್ಲಿ ಜೀವನದಲ್ಲಿ ಬರೀ ಕಷ್ಟಗಳೇ ಏನಪ್ಪಾ ಮಾಡೋದು ಎನ್ನುವ ಎಷ್ಟೋ ಜನರಿಗೆ ಯೋಗಿತಾ ಅವರು ಸ್ಫೂರ್ತಿ ಎಂದರೆ ತಪ್ಪಾಗೊದಿಲ್ಲ.