ಜಗತ್ತಿನ ಶತಮಾನದ ಮಹಾದಾನಿ ಯಾರಂತ ಗೊತ್ತಾದ್ರೆ ಹೆಮ್ಮೆ ಪಡುತ್ತೀರಾ !

Inspire
Advertisements

ಹರೂನ್ ಮತ್ತು ಎಡೆಲ್ ಗಿವ್ ಎಂಬ ಸಂಸ್ಥೆಗಳು ಜಂಟಿಯಾಗಿ ಐವತ್ತು ಜನ ಅತಿದೊಡ್ಡ ದಾನಿಗಳ ಪಟ್ಟಿಯನ್ನ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮ ರಂಗದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡು ಅತಿದೊಡ್ಡ ದಾನಿ ಎಂದು ಈ ಎರಡು ಪ್ರತಿಷ್ಠಾನಗಳು ಹೇಳಿವೆ. 1892ರಲ್ಲಿಯೇ ದಾನ ನೀಡಲು ಆರಂಭಿಸಿದ ಜೆಮ್ ಶೆಡ್ ಜಿ ಅವರು ಇದುವರೆಗೂ ದಾನವಾಗಿ ನೀಡಿದ ಹಣದ ಮೊತ್ತ 102 ಬಿಲಿಯನ್ ಡಾಲರ್ ಅಂದ್ರೆ 7.56 ಲಕ್ಷ ಕೋಟಿ ಮೊತ್ತವಾಗಿದೆ. ಭಾರತದ ಟಾಟಾ ಉದ್ಯಮ ಸಮೂಹವನ್ನು ಸ್ಥಾಪಿಸಿದವರು ಜೆಮ್‌ಶೆಡ್‌ಜಿ ಟಾಟಾ. ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಜೆಮ್‌ಶೆಡ್‌ಜಿ ಅವರು ಉದ್ಯಮಿಗಳಾದ ಬಿಲ್ ಗೇಟ್ಸ್, ವಾರೆನ್ ಬಫೆಟ್, ಜಾರ್ಜ್‌ ಸಾರೋಸ್ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರಿಗಿಂತ ಮುಂದಿದ್ದಾರೆ.

[widget id=”custom_html-4″]

Advertisements

ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ ದಾನಿಗಳು ಕಳೆದ ಶತಮಾನದಲ್ಲಿ ಹೆಚ್ಚು ಪ್ರಭಾವಿಗಳಾಗಿದ್ದಿರಬಹುದು.
ಆದರೆ, ಭಾರತದ ಟಾಟಾ ಸಮೂಹದ ಸ್ಥಾಪಕ ಆಗಿರುವ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ’ ಎಂದು ಹರೂನ್‌ನ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್‌ ಹೂಗ್‌ವರ್ಫ್‌ ತಿಳಿಸಿದ್ದಾರೆ. ಇನ್ನ ದಾನಿಗಳ ಈ ಪಟ್ಟಿಯಲ್ಲಿ ಇನ್ನೊಬ್ಬ ಭಾರತೀಯ ವಿಪ್ರೊ ಕಂಪನಿ ಅಜೀಂ ಪ್ರೇಮ್‌ಜಿ ಅವರು ಸಹ ಸ್ಥಾನ ಪಡೆದಿದ್ದಾರೆ. ಐವತ್ತು ಜನ ದಾನಿಗಳ ಪಟ್ಟಿಯಲ್ಲಿ 38 ಜನ ಅಮೆರಿಕದವರು, ಐವರು ಬ್ರಿಟನ್ನಿನವರು, ಮೂವರು ಚೀನಾ ದೇಶದವರಾಗಿದ್ದಾರೆ.

[widget id=”custom_html-4″]

ಇನ್ನು ಟಾಟಾ ಗ್ರೂಪ್ ನ ಮಾಜಿ ಚೇರ್ ಮೆನ್ ಆಗಿರೋ ರತನ್ ಟಾಟಾ ಅವರು ಕೂಡ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಕೋವಿಡ್ ಸಂದರ್ಭ ಸೇರಿದಂತೆ ಹಲವಾರು ಪರಿಸ್ಥಿತಿಗಳಲ್ಲಿ ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಕೋಟ್ಯಂತರ ರೂಗಳನ್ನ ಸಹಾಯ ಮಾಡುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ. ಇನ್ನು ನಮ್ಮ ಕರ್ನಾಟಕದ ಅಮ್ಮ, ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷರೂ ಆಗಿರುವ ಸುಧಾ ಮೂರ್ತಿ ಅಮ್ಮನವರು ಮಾಡುವ ಸಹಾಯ ಕನ್ನಡಿಗರಿಗೆಲ್ಲಾ ಗೊತ್ತಿರುವ ವಿಷಯವೇ..ಸಾವಿರಾರು ಕೋಟಿ ಹಣವಿದ್ದರೂ ಸರಳ ಜೀವನ ನಡೆಸುವ, ರಾಜ್ಯದ ಜನರು ಪ್ರವಾಹ ಸೇರಿದಂತೆ ಕೊರೋನಾದಿಂದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ಬೇಕಾದ ಮೆಡಿಕಲ್ ಸಲಕರಣೆಗಳಿಂದ ಹಿಡಿದು, ಜನರಿಗೆ ಫುಡ್ ಕಿಟ್ ಕೊಡುವದಾಗಿರಬಹುದು, ರಾಜ್ಯ ಸರ್ಕಾರಕ್ಕೆ ಕೋವಿಡ್ ಪರಿಹಾರ ನಿಧಿಗೆ ಹಣ ಕೊಡುವುದಾಗಿರಬಹುದು ಹೀಗೆ ರೀತಿಯಲ್ಲಿ ರಾಜ್ಯದ ಸಂಕಷ್ಟಕ್ಕೆ ಮಿಡಿಯುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ ಸುಧಾಮೂರ್ತಿ ಅಮ್ಮನವರು..