ಯುವರತ್ನ ಚಿತ್ರದ ಪರವಾಗಿ ಧ್ವನಿ ಎತ್ತಿದ ದಿನಕರ್ ತೂಗುದೀಪ್ ಹೇಳಿದ್ದೇನು ಗೊತ್ತಾ ?

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಯುವರತ್ನ ಚಿತ್ರ ಸುಮಾರು ೬೦೦ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಇದೆ ಏಪ್ರಿಲ್ ೧ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಸಾಮಾಜಿಕ ಸಂದೇಶ ಸಾರುವ ಕುಟುಂಬವೆಲ್ಲಾ ಕುಳಿತು ನೋಡಬಹುದಾದ ಅತ್ತ್ಯನ್ನತ ಸಿನಿಮಾ ಎಂಬ ಮಾತುಗಳು ಪ್ರೇಕ್ಷಕ ವರ್ಗದಿಂದ ವ್ಯಕ್ತವಾಗುತ್ತಿದೆ. ಆದರೆ ಇದರ ನಡುವೆಯೇ ಕರ್ನಾಟಕ ಸರ್ಕಾರ ಇದ್ದಕಿದ್ದಂತೆ ಕೊ’ರೋನಾ ಸೋಂ’ಕು ಹೆಚ್ಚಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಸೋಂಕಿನ ನಿಯಂತ್ರಣದ ಕುರಿತು ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು ೮ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಕೇವಲ 50% ಸೀಟುಗಳಿಗೆ ಮಾತ್ರ ನಿರ್ಬಂಧ ಹೇರಿದೆ.

ಇನ್ನು ಇದ್ದಕಿದ್ದಂತೆ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ನಟ ಪುನೀತ್ ಸೇರಿದಂತೆ ಅವರ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಒಳ್ಳೆಯ ಚಿತ್ರವನ್ನ ಕೊ’ಲೆ ಮಾಡುತ್ತಿದೆ ಸರ್ಕಾರ ಎಂದುತಮ್ಮ ಆ’ಕ್ರೋಶ ವ್ಯಕ್ತಪಡಿಸಿದ್ದಾರೆ.. ಚಿತ್ರ ಬಿಡುಗಡೆಯಾಗುವ ಹಿಂದಿನ ದಿನ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಹೇಳಿದ್ದರೂ ನಾವು ಸಿನಿಮಾ ಬಿಡುಗಡೆ ಮಾಡುತ್ತಿರಲಿಲ್ಲ, ಈಗಾಗಲೇ ಭಾನುವಾರದವರೆಗೆ ಟಿಕೆಟ್ ಗಳು ಮಾರಾಟವಾಗಿವೆ..ಇದ್ದಕಿದ್ದಂತೆ ಸರ್ಕಾರ ಈ ರೀತಿಯಾಗಿ ನಿರ್ಧಾರ ತೆಗೆದುಕೊಂಡರೆ ಸಿನಿಮಾ ಮಂದಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ನಟ ಪುನೀತ್ ಮತ್ತು ನಿರ್ದೇಶ ಸಂತೋಷ್ ಆನಂದ್ ರಾಮ್ ಅವರು ಹೇಳಿದ್ದಾರೆ. ಇನ್ನು ಸರ್ಕಾರದ ಮಂತ್ರಿಗಳಿಗೆ ಫೋನ್ ಮಾಡುವ ಮೂಲಕ ಸರ್ಕಾರ ತನ್ನ ನಿರ್ಧಾರವನ್ನ ಹಿಂತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಫೋನ್ ಕಾಲ್ ಅಭಿಯಾನ ಆರಂಭಿಸಿದ್ದಾರೆ.

ಇನ್ನು ನಟ ಕಿಚ್ಚ ಸುದೀಪ್ ಅವರು ಕೂಡ ಟ್ವೀಟ್ ಮಾಡಿ ಇದ್ದಕಿದ್ದಂತೆ ಥಿಯೇಟರ್ ಗಳಲ್ಲಿ ೫೦% ಸೀಟ್ ಗಳಿಗೆ ನಿರ್ಬಂಧ ಹೇರಿರುವುದು ಈಗಷ್ಟೇ ರಿಲೀಸ್ ಆಗಿರುವ ಸಿನಿಮಾಗಳಿಗೆ ತುಂಬಾ ಅ’ಪಾಯಕಾರಿ. ಆದರೆ ಇಂತಹ ಪರಿಸ್ಥಿತಿಯನ್ನ ಎದುರಿಸುವ ಶಕ್ತಿ ಯುವರತ್ನ ಸಿನಿಮಾ ತಂಡಕ್ಕೆ ಸಿಗಲಿ ಎಂದು ಟ್ವೀಟ್ ಮಾಡಿ ಆರೈಸಿದ್ದಾರೆ. ಇನ್ನು ಯುವರತ್ನ ಚಿತ್ರದ ಪರವಾಗಿ ಧ್ವನಿಯೆತ್ತಿರುವ ನಟ ದರ್ಶನ್ ಅವರ ಸಹೋದರ ನಿರ್ದೇಶಕ ಹಾಗೂ ನಟ ಕೂಡ ಆಗಿರುವ ದಿನಕರ್ ತೂಗುದೀಪ್ ಅವರು ಯಾವುದೇ ಮುನ್ಸೂಚನೆ ಕೊಡದೆ ಇದ್ದಕಿದ್ದಂತೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ

ಒಂದು ಒಳ್ಳೆಯು ಸಿನಿಮಾಗೆ ಮಾಡುತ್ತಿರುವ ಅನ್ಯಾಯ. ಎಲ್ಲಾ ವರ್ಗದ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಯುವರತ್ನ ಸಿನಿಮಾಗೆ ಸರ್ಕಾರ ೧೦೦% ಸೀಟ್ ಗಳ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ದಿನಕರ್ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸ್ನೇಹಿತರೇ, ನಿಮ್ಮ ಪ್ರಕಾರ ಸರ್ಕಾರ ಇದ್ದಕಿದ್ದಂತೆ ತೆಗೆದುಕೊಂಡಿರುವ ಈ ನಿರ್ಧಾರ ಸರಿಯೇ ಅಥ್ವಾ ತಪ್ಪಾ ಎಂದು ಕಾ’ಮೆಂಟ್ ಮಾಡಿ ನಿಮ್ಮ ಅಭಿವ್ರಾಯ ತಿಳಿಸಿ..